ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಇಂದು ಎಸ್‌ಐಟಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ಮೂರನೇ ಎಸಿಎಂಎಂ ನ್ಯಾಯಾಲಯವು ಆತನನ್ನು ವಿಚಾರಣೆಗೆ 14 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಪರಶುರಾಮ್‌ ವಾಗ್ಮೋರೆ (26) ಸಿಂಧಗಿ ಮೂಲದವನು . ಗೌರಿ ಲಂಕೇಶ್ ಹಂತಕ ಕರ್ನಾಟಕ ಪೊಲೀಸರ ಸೆರೆಯಲ್ಲಿ ಪರಶುರಾಮ್ ವಾಗ್ಮೋರೆಯೇ ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸಿದ್ದು ಎನ್ನಲಾಗಿದ್ದು ಈತನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.