ಬೆಂಗಳೂರು:ಗೌರಿ ಲಂಕೇಶ್ ಅವರ ಹತ್ಯೆಯ ಪ್ರಮುಖ ಆರೋಪಿ ವಿಜಯಪುರ ಜಿಲ್ಲೆಯ ಸಿಂದಗಿಯ ಪರಶುರಾಮ್ ವಾಗ್ಮೊರೆ ಪಡೆದಿದ್ದು ಹಣ ಕೇವಲ 13 ಸಾವಿರ ರೂಪಾಯಿ ಅಂತ ಅಧಿಕಾರಿಗ ಮುಂದೆ ಹೇಳಿದ್ದಾನೆ.

ಹಿಂದು ವಿರೋಧಿ ಧೋರಣೆ ಸಹಿಸಲಾರದೇ ಹತ್ಯೆಗೆ ಒಪ್ಪಿಕೊಂಡಿದ್ದೆ. ಹಣಕ್ಕಾಗಿ ನಾನು ಗೌರಿ ಹತ್ಯೆಗೆ ಒಪ್ಪಿರಲಿಲ್ಲ.  ಎಂದು ಹೇಳಿರುವ ಪರುಶುರಾಮ್. ಗೌರಿ ಅವರ ಕೊಲೆಗೆ ಬೇಕಾದ ಎಲ್ಲಾ ತಯಾರಿ ಆದ ಬಳಿಕ ಬೆಂಗಳೂರಿನಲ್ಲಿರುವ ಗೌರಿ ಅವರ ಮನೆಯನ್ನು ನೋಡಲು ಶಿಕಾರಿಪುರದ ಕಪ್ಪನಹಳ್ಳಿಯ ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್ ಜೊತೆ ನಗರಕ್ಕೆ ಬಂದಿದ್ದೆ ಎಂದು ಹೇಳಿದ್ದಾನೆ

ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಲೇ ಔಟ್ ನಲ್ಲಿರುವ ಗೌರಿ ಮನೆ ಹಾಗೂ ಅಲ್ಲಿನ ಸ್ಥಳ ನೋಡಿದ ಬಳಿಕ 2017 ರ ಜುಲೈ 1 ರಂದು ನನ್ನ ಪ್ರಯಾಣ, ಊಟ ಹಾಗೂ ಇನ್ನಿತರ ಖರ್ಚಿಗಾಗಿ ಮೊದಲ ಹಂತದಲ್ಲಿ ಮೂರು ಸಾವಿರ ರೂ. ಹಣ ನೀಡಿದ್ದರು. ಎರಡ ತಿಂಗಳ ಬಳಿಕ ಗೌರಿ ಲಂಕೇಶ್ ಅವರನ್ನು ಮನೆ ಬಳಿ ಹತ್ಯೆ ಮಾಡಲಾಯಿತು. ಕೃತ್ಯ ಎಸಗಿದ ಬಳಿಕ ವ್ಯಕ್ತಿಯೊಬ್ಬ 10 ಸಾವಿರ ರೂ. ಹಣ ಒದಗಿಸಿದ್ದ ಎಂದು ಹೇಳಿದ್ದಾನೆ. ಒಟ್ಟು 13 ಸಾವರ ಮಾತ್ರ ಪರುಶರಾಮ್ ಕೈ ಸೇರಿದೆ.!