ಗುಲ್ಬರ್ಗಾ : ಪ್ರಶ್ನೆ ಪತ್ರಿಕೆ ಸೋರಿಕೆ, ಪ್ರಶ್ನೆಪತ್ರಿಕೆ ಅದಲು-ಬದಲು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೀಗೆ ಹಲವಾರು ವಿಷಯಗಳ ಮೂಲಕ ಚರ್ಚೆಗೆ ಗ್ರಾಸವಾಗುತ್ತಿದ್ದ ಗುಲ್ಬರ್ಗಾ ವಿ.ವಿ ಇದೀಗ ಪ್ರಾಧ್ಯಾಪಕರ ನಡುವಿನ ಕಿತ್ತಾಟಕ್ಕೂ ಸಾಕ್ಷಿಯಾಗಿದೆ.

ಸಸ್ಯಶಾಸ್ತ್ರ ವಿಭಾಗದ ಎಚ್.ಓ.ಡಿ ಡಾ.ಜಿ.ಎಂ.ವಿದ್ಯಾಸಾಗರ ಅವರಿಗೆ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಪಿ. ಮೇಲಕೇರಿ ಕಪಾಳಮೋಕ್ಷ ಮಾಡಿದ್ದಾರೆ. ಸಸ್ಯಶಾಸ್ತ್ರ ವಿಭಾಗದ ಕಚೇರಿಗೆ ಬಂದು ಹಲ್ಲೆ ಮಾಡಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಿದ್ದ ಪ್ರೊಫೆಸರ್​ಗಳೇ ಜಟಾಪಟಿ ನಡೆಸಿದ್ದಾರೆ. ಮಾತು ವಿಕೋಪಕ್ಕೆ ಹೋಗಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ವಿದ್ಯಾಸಾಗರ್​ಗೆ ಮನೋಶಾಸ್ತ್ರ ವಿಭಾಗದ ಪ್ರೊಫೆಸರ್ ಎಸ್.ಪಿ.ಮೇಲಕೇರಿ ಕಪಾಳ ಮೋಕ್ಷ ಮಾಡಿದ್ದಾರೆ.!