ಬೆಂಗಳೂರು: ಕಳೆದ ಅಕ್ಟೋಬರ್ 22 ರಂದು ಗಂಡು ಮಗುವಿಗೆ ಮೇಘನಾ ರಾಜ್ ಜನ್ಮ ನೀಡಿದ್ದರು. ಇದೀಗ ಜೂನಿಯರ್ ಚಿರು ಮಡಿಲಿಗೆ ಬಂದು ಮೂರು ವಾರಗಳು ತುಂಬಿದ್ದು, ಮೇಘನಾ ರಾಜ್ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಲಿದೆ.

ಹೌದು, ನಾಳೆ (ಗುರುವಾರ, ನವೆಂಬರ್ 12) ಜೂನಿಯರ್ ಚಿರುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ನಡೆಯಲಿದೆ.