ಬೆಂಗಳೂರು: ರಾಜ್ಯ ಸರ್ಕಾರ ಗುಪ್ತ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಬಂಪರ್ ಕೊಡುಗೆ ನೀಡಿದೆ. ವಿಶೇಷ ಭತ್ಯೆಯನ್ನು ಹೆಚ್ಚಳ ಮಾಡಲಾಗಿದ್ದು, ಪೇದೆಯಿಂದ ಎಸ್ಪಿ ಹಂತದವರೆಗೆ ಈ ಸೌಲಭ್ಯ ಸಿಗಲಿದೆ.

ಗುಪ್ತದಳದ ಒಟ್ಟು 1280 ಅಧಿಕಾರಿ ಮತ್ತು ಸಿಬ್ಬಂದಿ ವಿಶೇಷ ಭತ್ಯೆ ಸೌಲಭ್ಯ ಪಡೆಯಲಿದ್ದು, ಇದರಿಂದ ಸರ್ಕಾರಕ್ಕೆ 4.99 ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಹೇಳಲಾಗಿದೆ. 2019ರ ನವೆಂಬರ್ ನಿಂದಲೇ ಈ ವಿಶೇಷ ಭತ್ಯೆ ಪೂರ್ವಾನ್ವಯವಾಗಲಿದೆ.