ನವದೆಹಲಿ : ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ದಸರಾ ಹಾಗೂ ದೀಪಾವಳಿಗೆ ಭರ್ಜರಿ ಉಡುಗೊರೆಯನ್ನು ಕೇಂದ್ರ ಸರಕಾರ ನೀಡಿದೆ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 10 ಲಕ್ಷ ಗುತ್ತಿಗೆ ನೌಕರರಿಗೆ ಈಗ ಖಾಯಂ ನೌಕರರಂತೆ ವೇತನ ಸಿಗಲಿದೆ.

ಪ್ರಧಾನಿ ಕಚೇರಿ ಅಡಿಯಲ್ಲಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಆದೇಶ ಹೊರಡಿಸಿದ್ದು, ಆದೇಶದ ಪ್ರಕಾರ 8 ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಒಂದೇ ರೀತಿಯ ಕೆಲಸ ಮಾಡುವ ಖಾಯಂ ನೌಕರರು ಹಾಗೂ ಗುತ್ತಿಗೆ ನೌಕರರಿಗೆ ಒಂದೇ ರೀತಿಯ ಮೂಲ ವೇತನ ನೀಡಲು ಮುಂದಾಗಿದೆ.

ಈವರೆಗೆ ಗುತ್ತಿಗೆ ನೌಕರರು ಆಯಾ ರಾಜ್ಯ ಸರ್ಕಾರಗಳು ಸೂಚಿಸಿದಂತೆ ಕನಿಷ್ಠ ಮೂಲ ವೇತನವನ್ನು ಪಡೆಯುತ್ತಿದ್ದರು. ಕೌಶಲ್ಯ ರಹಿತ ಕಾರ್ಮಿಕರಿಗೆ ದೆಹಲಿ ಸರ್ಕಾರವು ಕನಿಷ್ಠ 14 ಸಾವಿರ ರೂ.ಗಳ ಮೂಲ ವೇತನವನ್ನು ನಿಗದಿಪಡಿಸಿದೆಯಂತೆ.!