ಚಿತ್ರದುರ್ಗ: ಇಂದು ಗುಡ್ ಫ್ರೈಡೇ. ಜಗತ್ತಿಗೆ ಶಾಂತಿ, ಸೌಹಾರ್ದ, ಸಹೋದರತೆಯ ಸಂದೇಶ ಸಾರಿ ಮಾನವ ಪಾಪ ವಿಮೋಚನೆಗಾಗಿ ಏಸು ಕ್ರಿಸ್ತರು ಶಿಲುಬೆಗೇರಿದ ದಿನ. ಈ ಪವಿತ್ರ ದಿನವನ್ನು ನಾಡಿನಾದ್ಯಂತ ಭಕ್ತಿಯಿಂದ ಆಚರಿಸಲಾಗುತ್ತದೆ. ಯೇಸು ಕ್ರಿಸ್ತರು ತ್ಯಾಗ ಮಾಡಿ ತನ್ನನ್ನು ತಾನು ಅರ್ಪಣೆ ಮಾಡಿಕೊಂಡ ದಿನವೇ ಶುಭ ಶುಕ್ರವಾರ.

ಈ ಶುಭ ಶುಕ್ರವಾರ ದಿನವನ್ನು ಬಯಲುನಾಡಾದ ಚಿತ್ರದುರ್ಗದಲ್ಲಿಯೂ ಸಹಾ ಕ್ರೈಸ್ತ ಬಾಂಧವರು ಭಕ್ತಿ ಮತ್ತು ಶೃದ್ಧೆಯಿಂದ ಆಚರಿಸಿದರು. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ನಗರದ ಚರ್ಚ್‌ಗಳಿಗೆ ತೆರಳಿ ವಿಶೇಷ ಪಾರ್ಥನೆ ಸಲ್ಲಿಸಿದರು.

ಶಾಂತಿ ಪ್ರೀತಿ ಸಹನೆ, ಮಾನವೀಯತೆಯ ಗುಡ್ ಫ್ರೈಡೆಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಮುನ್ನ ಶಿಲುಬೆಯನ್ನು ಹೊತ್ತು ಸಾಗಿದ ಘಟನಾವಳಿಗಳನ್ನು ಸ್ಮರಿಸಿ, ನೆನಪಿಸಿಕೊಳ್ಳುವ ಶಿಲುಬೆ ಹಾದಿಯಲ್ಲಿ ಪಾಲ್ಗೊಂಡರು. ಕ್ರೈಸ್ತರ ಪವಿತ್ರ ಕಪ್ಪು ದಿನಗಳ ಆಚರಣೆಯ ಅನೇಕ ಕ್ರೈಸ್ತ ಧರ್ಮಗುರುಗಳು ಹಾಗೂ ನೂರಾರು ಭಕ್ತರು ಈ ವಿಶೇಷ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿದರು. ಶುಭ ಶುಕ್ರವಾರದಂದು ಏಸು ಕ್ರಿಸ್ತ ಶಿಲುಬೆಗೆ ಏರಿದ ನೆನಪಿಗಾಗಿ ಈ ಪೂಜಾ ವಿಧಿಯನ್ನು ನಡೆಸಲಾಗುತ್ತದೆ.