ಲಕ್ನೋ: ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿ ಎ.ಕೆ. ಶರ್ಮಾ ಶೀಘ್ರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.ಎಕೆ ಶರ್ಮಾ ಇತ್ತೀಚೆಗಷ್ಟೇ ಸರ್ಕಾರದ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು.

ಜನವರಿ 18 ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಚುನಾವಣೆಯಲ್ಲಿ ಶರ್ಮಾ ಅವರನ್ನು ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚಂದ್ರಮೋಹನ್, ‘ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಬಗ್ಗೆ ಕೇಂದ್ರ ನಾಯಕರೇ ಅಂತಿಮಗೊಳಿಸುತ್ತಾರೆ’ ಎಂದು ಹೇಳಿದರು.

ಪಕ್ಷಕ್ಕಾಗಿ ಕೆಲಸ ಮಾಡಬೇಕೆಂದು ತಿಳಿಸಿರುವ ಶರ್ಮಾ ಅವರು, ಶೀಘ್ರದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ವಕ್ತಾರ ಚಂದ್ರ ಮೋಹನ್ ಗುರುವಾರ ತಿಳಿಸಿದ್ದಾರೆ.
ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಸಮಯದಲ್ಲೇ, ಉತ್ತರ ಪ್ರದೇಶದ ವಿಧಾನಪರಿಷತ್‌ನ 12 ಸ್ಥಾನಗಳಿಗೆ ಜನವರಿ 28 ರಂದು ನಡೆಯುವ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ.

ಉತ್ತರ ಪ್ರದೇಶದ ಮಾವು ಜಿಲ್ಲೆಯ 1988ಬ್ಯಾಚ್‌ನ ಅಧಿಕಾರಿ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾಗಿದ್ದಾರೆ. ಜತೆಗೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾ ಅವರ ಜೊತೆ ಕೆಲಸ ಮಾಡಿದ್ದರು.