ಬೆಂಗಳೂರು: ಖಚಿತ ಮಾಹಿತಿ ಮೇರೆಗೆ ಐಟಿ ಬಿಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಗಾಂಜಾ‌ ‌ಮಾರುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಬೈಯಪನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ, ಬಂಧಿತರಿಂದ ಸುಮಾರು 123 ಗ್ರಾಂ ಕೊಕೇನ್, 15 ಟ್ಯಾಬ್ಲೆಟ್ಸ್​, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳು, ಮೊಬೈಲ್ ಗಳು ಸೇರಿದಂತೆ ಒಟ್ಟು 10, 96,500 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೇ ಎನ್​ಡಿಪಿಎಸ್ ಆ್ಯಕ್ಟ್ 21 ಸಿ ಹಾಗೂ ವಿದೇಶಿ ನೋಂದಣಿ ಕಾಯ್ದೆಯಡಿ ಸಹ ಕೇಸ್ ದಾಖಲು ಮಾಡಲಾಗಿದೆ.