ಬೆಂಗಳೂರು: ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ರೈತನ ಗದ್ದೆಯಲ್ಲಿ ಭತ್ತ ನಾಟಿ ಮಾಡಿಬಿಟ್ಟರೆ ರೈತರ ಸಮಸ್ಯೆಯೇನೂ ಪರಿಹಾರವಾಗುತ್ತಾ ಅಂತ ವ್ಯಂಗಮಾಡಿದ್ದಾರೆ ಮಾಜಿ ಮುಖ್ಯ ಮಂತ್ರಿ ಯಡುಯೂರಪ್ಪನವರು.

ಗದ್ದೆಗಿಳಿದು ನಟಿ ಮಾಡಿದ ತಕ್ಷಣ ರೈತರ ಮೂಲಭೂತ ಸಮಸ್ಯೆಗಳು ಪರಿಹಾರವಾಗಲ್ಲ. ಹಾಗೇ   ಬೀದರ್, ಕಲಬುರಗಿ, ರಾಯಚೂರು ಸೇರಿದಂತೆ 14 ಜಿಲ್ಲೆಗಳಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ನೀರಿಗಾಗಿ ಹಾಹಾಕಾರ ಎದುರಾಗಿದೆ.ಆದರೆ ಆ ಭಾಗಗಳಿಗೆ ಸಚಿವರು ಭೇಟಿ ನೀಡಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರದ ಆಡಳಿತದ ಬಗ್ಗೆ ಜನ ಬೇಸತ್ತು ಹೋಗಿದ್ದಾರೆ. ಯಾವಾಗ ಸರ್ಕಾರ ಬೀಳುತ್ತೋ ಅಂತ ಜನರು ಎದುನೋಡುತ್ತಿದ್ದಾರೆ ಎಂದರು