ಬೆಂಗಳೂರು: ಒಂದು ಕಾಲದಲ್ಲಿ ಬಳ್ಳಾರಿಯಲ್ಲಿ  ಅರಣ್ಯ ಅಧಿಕಾರಿ ಆಗಿ ಕೆಲಸ ನಿರ್ವಹಿಸುತಿದ್ದಾಗ ಗಣಿ ಧಣಿ ಜನಾರ್ದನರೆಡ್ಡಿ – ಶ್ರೀರಾಮುಲು ಆಪ್ತರಾಗಿದ್ದ, ಪ್ರಾದೇಶಿಕ  ವಲಯಾರಣ್ಯಾಧಿಕಾರಿ ಎಚ್.ರಾಮಮೂರ್ತಿ ಮನೆಯ‌ ಮೇಲೆ ಇಂದು ಬೆಳ್ಳಂ ಬೆಳ್ಳಿಗ್ಗೆ  ಎಸಿಬಿ ನಡೆದಿದೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಪ್ರಾದೇಶಿಕ  ವಲಯಾರಣ್ಯಾಧಿಕಾರಿ ಆಗಿ ಎಚ್.ರಾಮಮೂರ್ತಿ ಕೆಲಸ ನಿರ್ವಹಿಸುತ್ತಿದ್ದರು..

ರಾಮಮೂರ್ತಿ ಮನೆ ಹಾಗೂ ಕಚೇರಿ,  ಹಾಗೂ ಚಿತ್ರದುರ್ಗದ ಕೋಟೆ ರಸ್ತೆಯಲ್ಲಿರುವ ಮನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿನ ಕಚೇರಿ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭಕ್ತನಕಟ್ಟೆ ಗ್ರಾಮದಲ್ಲಿನ ಮನೆ, ತೋಟ, ರಾಮಮೂರ್ತಿ ಮಾವ ಕೆಂಚಪ್ಪ ಒಡೆತನದ ಮನೆ, ತೋಟ ಏಕಕಾಲದಲ್ಲಿ ದಾಳಿ ನಡೆದಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಮಾಹಿತಿ‌ ಹಿನ್ನೆಲೆ ಎಸಿಬಿ ಅಧಿಕಾರಿಗಳ ದಾಳಿನಡೆಸ ಲಾಗಿದೆ ಎಂದು ತಿಳಿದುಬಂದಿದೆ.