ದಾವಣಗೆರೆ : ಯಡಿಯೂರಪ್ಪರ ಮಂತ್ರಿ ಮಂಡಲದಲ್ಲಿ ಚಿತ್ರದುರ್ಗದ ಉಸ್ತುವಾರಿ ಸಚಿವರು ಹಾಗೂ ಕಂದಾಯ ಮಂತ್ರಿ ಆಗಿದ್ದ ಕರುಣಾಕರ ರೆಡ್ಡಿ ಈ ಬಾರಿ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು ನೀಡಿರುವ ಅಫಿಡೆವಿಟ್ ನಲ್ಲಿ ಬಂಗಾರ ಘೋಷಣೆ ಮಾಡಿರುವುದು ಎಲ್ಲರಿಗೂ ಹುಬ್ಬೇರಿಸುವಂತಾಗಿದೆ.!

.ತಮ್ಮ ಬಳಿ 5452 ಗ್ರಾಂ ಚಿನ್ನ ತಮ್ಮ ಪತ್ನಿ ವಜನಾ ಬಳಿ 6,200 ಗ್ರಾಂ ಚಿನ್ನ ಅಂದರೆ ದಂಪತಿ ನಡುವೆ ಬರೋಬ್ಬರಿ 11 ಕೆಜಿ 652 ಗ್ರಾಂ ಚಿನ್ನ ಹೊಂದಿದ್ದಾರೆ. ಇದರ ಜೊತೆಗೆ ಕರುಣಾಕರ ರೆಡ್ಡಿ 10.02ಕೋಟಿ ರೂ. ಮೌಲ್ಯದ ಚರಾಸ್ತಿ, 35.50 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, ಪತ್ನಿ ವಜನಾ ಹೆಸರಲ್ಲಿ 9.94 ಕೋಟಿ ರೂ. ಮೌಲ್ಯದ ಚರಾಸ್ತಿ 3.50 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, ಒಟ್ಟು ಆಸ್ತಿ 59.14 ಕೋಟಿ ರೂ. ಇದೆಯಂತೆ.

ಕರುಣಾಕರ ರೆಡ್ಡಿ ಬಳಿ ಎರಡು ಕಾರು, 3.22 ಕೋಟಿ ರೂ.ಮೌಲ್ಯದ ವಿವಿಧ ಕಂಪನಿ ಷೇರು ಬಳ್ಳಾರಿ ನಗರದ ಸಿರಗುಪ್ಪ ರಸ್ತೆಯಲ್ಲಿ 1 ಮನೆ, ಬಳ್ಳಾರಿ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆ ಹಾಗೂ ಆಂಧ್ರಪ್ರದೇಶದ ಮೂರು ಕಡೆ ಒಟ್ಟು 3.17 ಕೋಟಿ ಮೌಲ್ಯದ ಕೃಷಿ ಜಮೀನು, ವಿವಿಧ ಬ್ಯಾಂಕ್ ಗಳಲ್ಲಿ 22.19 ಕೋಟಿ ರೂ. ಸಾಲ ಹೊಂದಿರುವ ಮಾಹಿತಿಯನ್ನು ತಮ್ಮ ಆಸ್ತಿ ವಿವರದಲ್ಲಿ ಘೋಷಣೆಮಾಡಿದ್ದಾರೆ.!