ಚಿಕ್ಕಬಳ್ಳಾಪುರ : ಉದ್ಯೋಗಾಕಾಂಕ್ಷಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇ-ಆಸ್ಪತ್ರೆ ಕಾರ್ಯಕ್ರಮದಲ್ಲಿ ಖಾಲಿ ಇರುವ ಗಣಕಯಂತ್ರ ಸಹಾಯಕರ ಹುದ್ದೆಗಳಿಗೆ ಗೌರವಧನ ಆಧಾರದಲ್ಲಿ ನೇಮಕಾತಿಗೆ ಅದೇಶ ಹೊರಡಿಸಲಾಗಿದೆ.

ಗಣಕಯಂತ್ರ ಸಹಾಯಕರ ಹುದ್ದೆಗೆ ಗೌರವಧನ ಆಧಾರದಲ್ಲಿ ನಿಯಮಾನುಸಾರ ನೇರ ಸಂದರ್ಶನ ಮತ್ತು ಎನ್ ಐಸಿ ಪರೀಕ್ಷೆ ಆಧಾರದಲ್ಲಿ ಭರ್ತಿ ಮಾಡಲಾಗುವುದು. ನವೆಂಬರ್ 7 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಜಿಲ್ಲಾಡಳಿತ ಭವನ ಶಿಡ್ಲಘಟ್ಟ ರಸ್ತೆ ಚಿಕ್ಕಬಳ್ಳಾಪುರದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.

ಒಟ್ಟು ಹುದ್ದೆಗಳು -20. ವಿದ್ಯಾರ್ಹತೆ-ಪಿಯುಸಿ ಮತ್ತು ಕಂಪ್ಯೂಟರ್ ಜ್ಞಾನ (ಕಡ್ಡಾಯ) ಗೌರವಧನ -13,900 (ಪ್ರತಿ ತಿಂಗಳಿಗೆ)