ಮುಂಬೈ : ಬಾಲಿವುಡ್ ನಟಿ ಕಂಗನಾ ರನೌತ್ ಅಮೆರಿಕಾ ಚುನಾವಣಾ ಫಲಿತಾಂಶಗಳ ಬಗ್ಗೆ ಹೇಳಿಕೆ ನೀಡಿದ್ದು ಜೋ ಬೈಡನ್ ಗಜನಿ ಎಂದು ಕರೆದಿದ್ದಾರೆ.

ಬೈಡನ್ ಅಧ್ಯಕ್ಷರಾಗಿ ಮತ್ತು ಕಮಲಾ ಹ್ಯಾರಿಸ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆ ಟ್ವೀಟ್ ಮಾಡಿರುವ ನಟಿ ಕಂಗನಾ ರನೌತ್ ಅಮೆರಿಕದ ಭವಿಷ್ಯದ ಬಗ್ಗೆ ಹೇಳಿದ್ದು ‘ಗಜನಿ ಬೈಡನ್ ಅವರ ಡೇಟಾ ಪ್ರತಿ 5 ನಿಮಿಷಕ್ಕೆ ಕ್ರ್ಯಾಶ್ ಆಗುತ್ತದೆ, ಅವರ ಮೆಡಿಸಿನ್​ಗಳ ಬಗ್ಗೆ ನಮಗೆ ಖಾತ್ರಿಯಿಲ್ಲ. ಅವರು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಮುಂದುವರಿಯುವುದಿಲ್ಲ ಎಂದಿದ್ದಾರೆ.

ಕಮಲಾ ಹ್ಯಾರಿಸ್ ಭಾಷಣದ ವಿಡಿಯೋ ಶೇರ್ ಮಾಡಿರುವ ಕಂಗನಾ ಕಮಲಾ ಹ್ಯಾರಿಸ್ ವಿಜಯ ಮಹತ್ವದ್ದಾಗಿದೆ. ಒಬ್ಬ ಮಹಿಳೆ ಎತ್ತರಕ್ಕೇರಿದಾಗ ಅವಳು ಪ್ರತಿಯೊಬ್ಬ ಮಹಿಳೆಗೆ ದಾರಿ ತೋರುತ್ತಾಳೆ. ಈ ಐತಿಹಾಸಿಕ ದಿನಕ್ಕಾಗಿ ಚಿಯರ್ಸ್’ ಎಂದಿದ್ದಾರೆ.