ಬೆಂಗಳೂರು: ಗಂಡ- ಹೆಂಡತಿ  ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಹಾಗೂ ಒಬ್ಬರಿಗೆ ಸರ್ಕಾರಿ ಕ್ವಾರ್ಟರ್ಸ್ ( ಮನೆ)  ಸಿಕ್ಕಿದ್ದಲ್ಲಿ ಇಬ್ಬರಿಗೂ ಮನೆ ಬಾಡಿಗೆ ಭತ್ಯೆ ಸಿಗುವುದಿಲ್ಲ. ರಾಜ್ಯದಲ್ಲಿ ಎಲ್ಲ ಸರ್ಕಾರಿ, ಅನುದಾನ ಪಡೆಯುವ ಸಂಸ್ಥೆಗಳಿಗೆ ಇದು ಅನ್ವಯ ವಾಗುತ್ತದೆ.

ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಗಂಡ- ಹೆಂಡತಿ  ಇಬ್ಬರೂ ಸರ್ಕಾರಿ ನೌಕರರಾಗಿದ್ದರೂ ಪತಿಗೆ ಕ್ವಾರ್ಟರ್ಸ್ ಲಭಿಸಿತ್ತು. ಆದರೆ ಶಿಕ್ಷಕಿ ಬಾಡಿಗೆ ಭತ್ಯೆ ಪಡೆಯುತ್ತಿರುವುದು ಗಮನಕ್ಕೆ ಬಂದಿತ್ತು. ಇದನ್ನು ಪರಿಶೀಲಿಸಿದ ಡಿಡಿಪಿಐ ಅವರು ಮನೆ ಬಾಡಿಗೆ ಭತ್ಯೆ ರೂಪದಲ್ಲಿ ನೀಡಲಾದ ₹ 4.59 ಲಕ್ಷ ಹಣವನ್ನು ಕಡಿತಗೊಳಿಸಲು ಸೂಚನೆ ನೀಡಿ ಆದೇಶ ನೀಡಲಾಗಿದೆ.

ರಾಜ್ಯದ ಎಲ್ಲ ಇಲಾಖೆಗಳಿಗೂ ಅನ್ವಯವಾಗುವ ನಿಯಮ. ಪತಿ, ಪತ್ನಿ ಇಬ್ಬರೂ ಬೇರೆ ಬೇರೆ ಕಡೆಗಳಲ್ಲಿ ಕೆಲಸದಲ್ಲಿ ಇದ್ದರೆ ಅವರಿಗೆ ಇಬ್ಬರಿಗೂ ಮನೆ ಬಾಡಿಗೆ ಭತ್ಯೆ ಸಿಗುತ್ತದೆ. ಆದರೆ ಒಂದೇ ಕಡೆ ಇದ್ದು, ಒಬ್ಬರು ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ಇದ್ದರೆ ಇಬ್ಬರಿಗೂ ಭತ್ಯೆ ಇಲ್ಲ. ಹಾಗೊಂದು ವೇಳೆ ದುರುಪಯೋಗ ಪಡಿಸಿಕೊಂಡಿದ್ದರೆ ದಂಡ ಗ್ಯಾರಂಟಿ.!

( ಸಾಂದರ್ಭಿಕ ಚಿತ್ರ)