ಬೆಂಗಳೂರು ಕರ್ನಾಟಕದ ರಾಜ್ಯದ  ಖ್ಯಾತ ಸಂಶೋಧಕರಾದ ಡಾ. ಎಂ. ಚಿದಾನಂದ ಮೂರ್ತಿ ಅವರಿಗೆ 2018 ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಶಸ್ತಿ ಸಿಕ್ಕಿದೆ.

ಕನ್ನಡ ಶಾಸ್ತ್ರೀಯ ಭಾಷೆಯಲ್ಲಿ ಅವರು ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಶಾಸ್ತ್ರೀಯ ತೆಲುಗು, ಸಂಸ್ಕೃತ, ಪರ್ಷಿಯಾ, ಅರೇಬಿಕ್, ಪಾಲಿ ಸೇರಿದಂತೆ ವಿವಿಧ ಭಾಷೆಗಳ ಸಂಶೋಕರಿಗೂ ರಾಷ್ಟ್ರಪತಿ ಗೌರವ ಸಿಗಲಿದೆ.

ಚಿದಾನಂದಮೂರ್ತಿಗಳು ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ಣಾಟಕ ಇತಿಹಾಸ –ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ