ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಖಾಸಗಿ ವೈದ್ಯರು ತಮ್ಮ ನರ್ಸಿಂಗ್ ಹೋಂ ಬಂದ್ ಮಾಡಿ ಹೋರಾಟವನ್ನು ನಡೆಸುತ್ತಿದ್ದರು.

ಈ ವೈದ್ಯರ ಪ್ರತಿಭಟನೆಯಿಂದ ರಾಜ್ಯದಲ್ಲಿ ರೋಗಿಗಳು ಪರಿದಾಡುವಂತಾಯಿತು. 30 ಕ್ಕೂ ಹೆಚ್ ಮಂದಿಗೆ ಸಕಾಲಕ್ಕೆ ವೈದ್ಯ ಸಿಗದೇ ವೃದ್ದರಿಂದ ಹಿಡಿದು ಮಕ್ಕಳು ಸಹ ಈ ಸಾವನ್ನಪ್ಪಿದ್ದಾರೆ.

ರಾಜ್ಯಾಧ್ಯಂತ ಖಾಸಗಿ ವೈದ್ಯರ ಮುಷ್ಕರದಿಂದ ರೋಗಿಗಳು ಬಹಳ ನೋವನ್ನು ಅನುಭವಿಸಿದ್ದಾರೆ.

ಇದನ್ನು ಮನಗೊಂಡ ಬೆಂಗಳೂರಿನ ಅಮೃತೇಶ್ ಅವರು ದೂರನ್ನು ಹೈಕೋರ್ಟ್ ನಲ್ಲಿ ದಾಖಲಿಸಿದ್ದರು. ನಿನ್ನೆ ಕೋರ್ಟ್ ಕೇಸನ್ನು ಕೈಗೆತ್ತಿಕೊಂಡಿತು. ಇಂದು ಹೈಕೋರ್ಟ್ ಸ್ಪಷ್ಟವಾದ ಆದೇಶವನ್ನುನೀಡಿದೆ. ವೈದ್ಯರು ತಕ್ಷಣ ಮುಷ್ಕರ ಹಿಂಪಡೆರಿ ಎಂದು ಹೇಳಿದೆ.