ಚಿತ್ರದುರ್ಗ: ಹಿರಿಯೂರು ತಾ; ಗೊಲ್ಲಹಳ್ಳಿ ಚೆಕ್‌ಪೋಸ್ಟ್ ಬಳಿ ಸರಿಯಾದ ದಾಖಲೆಗಳಿಲ್ಲದೆ ಸಾಗಣೆ ಮಾಡುತ್ತಿದ್ದ 20 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಈ ಹಣ ವಿಜಯ ಬ್ಯಾಂಕ್‌ಗೆ ಸೇರಿದೆ ಎಂದು ಹೇಳಲಾಗುತ್ತಿದ್ದು ಚಳ್ಳಕೆರೆ ವಿಜಯಬ್ಯಾಂಕ್‌ನಿಂದ ಹಿರಿಯೂರು ತಾ; ಮಸ್ಕಲ್ ವಿಜಯ ಬ್ಯಾಂಕ್‌ಗೆ ಹಣವನ್ನು ಸಾಗಣೆ ಮಾಡುವ ಮಾರ್ಗದಲ್ಲಿ ಗೊಲ್ಲಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುವ ವೇಳೆ ಸರಿಯಾದ ದಾಖಲೆಗಳಿಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ.

20 ಲಕ್ಷ ಹಣವನ್ನು ಖಾಸಗಿ ವಾಹನದಲ್ಲಿ ಸಾಗಣೆ ಮಾಡಿರುವುದು ಕಂಡು ಬಂದಿದ್ದರಿಂದ ವಾಹನ ಹಾಗೂ ಹಣ ವಶಕ್ಕೆ ಪಡೆದು ಎಂ.ಸಿ.ಸಿ. ಕ್ಯಾಶ್ ಸೀಜರ್ ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿದೆ  ಎಂದು ತಿಳಿದು ಬಂದಿದೆ.