ಬೆಂಗಳೂರು: ಕೊರೋನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ‌ ಎಂದು ಸಚಿವ ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಅದರಲ್ಲಿಚಿಕಿತ್ಸೆ ಒದಗಿಸುವ ಸಾಮರ್ಥ್ಯವಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರ ಶಿಫಾರಸು ಮಾಡುವ ಸೋಂಕಿತರಿಗೆ ಕಾಯ್ದಿರಿಸಲಾಗುವುದು. ಚಿಕಿತ್ಸೆ ದರ ನಿಗದಿ ಮಾಡಲಾಗಿದೆ ಎಂದಿದ್ದಾರೆ.
ಜನರಲ್ ವಾರ್ಡ್-5200,
ಹೆಚ್ ಡಿಯು-7000,
ವೆಂಟಿಲೇಟರ್ ಇಲ್ಲದ ಐಸೋಲೇಷನ್ ICU-8500,
ವೆಂಟಿಲೇಟರ್ ಇರುವ ಐಸೋಲೇಷನ್ ICU-10,000. ದರ ನಿಗಿದಿಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.!