ಬೆಂಗಳೂರು : ಕೋವಿಡ್-19 ಕರ್ತವ್ಯ ನಿರತ ರಾಜ್ಯದ ಗ್ರಾಮ ಪಂಚಾಯ್ತಿ ನೌಕರರು ಸೋಂಕಿನಿಂದ ಮರಣ ಹೊಂದಿದಲ್ಲಿ ರೂ.30 ಲಕ್ಷ ವಿಮಾ ಪರಿಹಾರವನ್ನು ನೀಡಲಾಗುತ್ತದೆ. ಎಂದು ಸರಕಾರ ಹೇಳಿದೆ.

ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಕೊರೋನಾ ಕರ್ತವ್ಯ ನಿರತರಾಗಿರುವಂತ ಬಿಲ್ ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್ ಮೆಲ್, ಪಂಪ್ ಆಪರೇಟರ್, ಪಂಪ್ ಮೆಕಾನಿಕಲ್, ಜವಾನ ಮತ್ತು ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವವರಿಗೂ ಕೊರೋನಾ-19 ನಿಂದ ಮೃತಪಟ್ಟರೇ ರೂ.30 ಲಕ್ಷದವರೆಗೆ ಪರಿಹಾರ ದೊರೆಯಲಿದೆ. ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾದಂತ ಪಿ ಶಿವಶಂಕರ್ ಆದೇಶ ಹೊರಡಿಸಿದ್ದಾರೆ.