ಬೆಂಗಳೂರು : ಕೋವಿಡ್-19 ಕರ್ತವ್ಯದ ವೇಳೆ ಮೃತಪಟ್ಟ ಸರ್ಕಾರಿ ನೌಕರರಿಗೆ 30 ಲಕ್ಷ ರೂ. ವಿಮಾ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಅದೇಶವನ್ನು ಕೂಡ ಹೊರಡಿಸಿದೆ.

ಕೊರೊನಾ ನಿಯಂತ್ರಣ ಕರ್ತವ್ಯದಲ್ಲಿರುವ ನೌಕರರು ಸೋಂಕಿಗೆ ಸಿಲುಕಿ ಅಕಾಲಿಕ ಮರಣ ಹೊಂದಿದ್ದಾರೆ. ಹೀಗಾಗಿ ನೌಕರರಿಗೆ ಮತ್ತು ಅವರ ಕುಟುಂಬವರ್ಗಕ್ಕೆ ಮನೋಸ್ಥೈರ್ಯ ತುಂಬಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಮೊತ್ತ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಸಿಎಂಗೆ ಮನವಿ ಮಾಡಿತ್ತು ನೌಕರರ ‌ಸಂಘದ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ ಇದೀಗ ಕೋವಿಡ್-19 ಕರ್ತವ್ಯದಲ್ಲಿರುವ ಸರ್ಕಾರಿ ನೌಕರರಿಗೂ ವಿಮಾ ಪರಿಹಾರ ನೀಡಲು ಮುಂದಾಗಿದೆ.