ಚಿತ್ರದುರ್ಗ: ಹೊಸದುರ್ಗದ ಜೆ.ಎಂ.ಎಫ್ ಸಿ ನ್ಯಾಯಾಧೀಶರ ಮೇಲೆ ಕೋರ್ಟ್ ಹಾಲಿನಲ್ಲಿ ಚಪ್ಪಲಿ ತೂರಿದ ಆರೋಪದ ಮೇಲೆ ಬೆಲಗೂರಿನ ಗ್ರಾಮದ ಬಿ.ಎಂ.ಶಿವಣ್ಣ ಎಂಬುವವರಿಗೆ ಹೈ ಕೋರ್ಟ್ ನಾಲ್ಕು ತಿಂಗಳ ಶಿಕ್ಷೆ ಹಾಗೂ  ಎರಡು ಸಾವಿರ ದಂಡ ವಿಧಿಸಿದೆ.

ಪ್ರಕರಣ: ಶಿವಣ್ಣ ತಮ್ಮ ಸಹೋದರರಾದ ಬಿ.ಎಂ.ಶೇಖರಪ್ಪ ಬಿ.ಎಂ.ರಂಗಪ್ಪ ವಿರುದ್ಧ ಪೋರ್ಜರಿ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆ ಹೊಸದುರ್ಗದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನಡೆಯುತಿತ್ತು. 2016 ರ ಡಿಸೆಂಬರ್ 23 ರಂದು ವಿಚಾರಣೆ ವೇಳೆ ಚಪ್ಪಲಿ ತೂರಿದ್ದರು. ಹಾಗಾಗಿ ಶಿವಣ್ಣರ ಮೇಲೆ ಹೈ ಕೋರ್ಟ್ ತೀರ್ಪು ನೀಡಿದೆ.