ಬಾಗಲಕೋಟೆ : ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದ ನಂತರವಷ್ಟೇ ಪೂರ್ಣಗೊಳ್ಳಲಿದೆ ಎಂದು ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ಹೇಳಿದ್ದಾರೆ.

ನಗರದ ಕೃಷ್ಣ ಮಠಕ್ಕೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಮ ಮಂದಿರದ ನಿರ್ಮಾಣದ ಶಂಕುಸ್ಥಾಪನೆ ಕುರಿತು ಪ್ರತಿಕ್ರಿಯೆ ನೀಡಿದರು. ‘ರಾಮಮಂದಿರಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿದೆ. ದಲಿತ ಭಕ್ತರೊಬ್ಬರಿಂದ ಶಂಕುಸ್ಥಾಪನೆ ಕೈಗೊಂಡು ಅಡಿಗಲ್ಲು ಅಳವಡಿಸಲಾಗಿದೆ ಎಂದರು.

ಸುಪ್ರೀಂಕೋರ್ಟ್ ಜಾಗವನ್ನೂ ಮೀಸಲಿರಿಸಿದೆ. ಆದರೆ ಸ್ಥಳಕ್ಕೆ ಸಂಬಂಧಪಟ್ಟಂತೆ ವಿವಾದವಿದೆ. ಸುಪ್ರೀಂಕೋರ್ಟ್ ಅನುಮತಿ ನೀಡಿದ ನಂತರವಷ್ಟೇ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.