ಬೆಂಗಳೂರು: ಲಿಂಗಾಯತರು ಕೋಮುವಾದಿ ಬಿಜೆಪಿಗೆ ಮತ ಹಾಕಬೇಡಿ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

ಬೆಳಗಾವಿಯ ಉಗಾರ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರವಾಗಿ ಮತಯಾಚನೆ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಿಜೆಪಿಗೆ ಭ್ರಮ‌ನಿರಸನವಾಗಿದ್ದು, ಸಿಎಂ ಯಡಿಯೂರಪ್ಪ ಲಿಂಗಾಯತರ ಹೆಸರಲ್ಲಿ ಮತ ಕೇಳುತ್ತಿದ್ದಾರೆ.ಮಾಧುಸ್ವಾಮಿ ಓರ್ವ ಕಾನೂನು ಸಚಿವರಾಗಿ ಜಾತಿ ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ ಸರಿನಾ.?

ವೀರಶೈವ ಲಿಂಗಾಯತ ಎನ್ನುವುದು ಜಾತ್ಯಾತೀತ ಸಮುದಾಯ ಹೀಗಾಗಿ ಲಿಂಗಾಯತರು ಕೋಮುವಾದಿ ಬಿಜೆಪಿಗೆ ಮತ ಹಾಕಬೇಡಿ ಅಂತ ಈಶ್ವರ ಖಂಡ್ರೆ ಕರೆ ನೀಡಿದ್ದಾರೆ.