ಚಿತ್ರದುರ್ಗ: ಮಾಜಿ ಸಂಸದ ಪಿ.ಕೋದಂಡರಾಮಯ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರಂತೆ. ಮೊದಲು ಜನತಪರಿವಾದಲ್ಲಿ ಗುರುತಿಸಿ ಕೊಂಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಂಡವರು.

ಆ ನಂತರ ರಾಜಕೀಯದಲ್ಲಿ ಅವರಿಗೆ ಅಷ್ಟೊಂದು ಆಗಿ ಬರಲಿಲ್ಲ. ಚಿತ್ರದುರ್ಗ ನೀರಾವರಿ ಹೋರಾಟ, ದಾವಣಗೆರೆ- ತುಮಕೂರು ನೇರ ರೈಲ್ವೆ ಹೋರಾಟದಲ್ಲಿ ಸಕ್ರಿಯರಾದವರು. ಆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸುವ ಆಲೋಚನೆ ಮಾಡಿದ್ದರು.

ಈಗ ಕೋದಂಡರಾಮಯ್ಯರು ಕಾಂಗ್ರೆಸ್ ತೊರೆದು ಜೆಡಿಯು ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಜೆಡಿಯು ಹೊಂದಾಣಿಕೆ ಆಗಿ, ಚುನಾವಣೆಯಲ್ಲಿ ಜೆಡಿಯು+ಕಾಂಗ್ರೆಸ್ ಅಭ್ಯರ್ಥಿ ಆಗಿ ದುರ್ಗದ ಕ್ಷೇತ್ರಕ್ಕೆ ನಿಲ್ಲತ್ತಾರಂತೆ ಸುದ್ದಿ ಹರಿದಾಡುತ್ತಿದೆ.

ಈ ಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಹಲವರು ಹೆಸರು ಹರಿದಾಡಿದರೂ ಸಹ ಹೈಕಮಾಂಡ್ ಅಂತಿಮ ಅಲ್ವ.!