ಹಾಸನ : ಕೋಡಿಮಠದ ಶ್ರೀಗಳು ಮೊದಲು ರಾಜ್ಯದಲ್ಲಿ ಮೇ ಅಂತ್ಯಕ್ಕೆ ಕೊರೋನಾ ವೈರಸ್ ಅಂತ್ಯವಾಗಲಿದೆ. ರಾಜ್ಯದಲ್ಲಿ ಕೊರೋನಾ ಅಷ್ಟೇನೂ ಪ್ರಭಾವ ಬೀರೋದಿಲ್ಲ ಎಂದು ಹೇಳಿದ್ದರು.

ಆದರೆ ಕೋಡಿಮಠದ ಶ್ರೀಗಳು, ಇದೀಗ ಮತ್ತೊಂದು ರೀತಿಯ ಶಾಕಿಂಗ್ ಭವಿಷ್ಯವನ್ನು ಕೊರೋನಾ ಬಗ್ಗೆ ನುಡಿದಿದ್ದಾರೆ. ಅದೇ ರಾಜ್ಯದಲ್ಲಿ ಕೊರೋನಾ ಆಸ್ವೀಜ ಮಾಸ, ಕಾರ್ತಿಕ ಮಾಸದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದ್ದು, ಹಳ್ಳಿಗಳಲ್ಲಿ ಹೆಮ್ಮಾರಿ ಮರಣ ಮೃದಂಗ ಭಾರಿಸಲಿದೆ .

ಇನ್ನೂ ಕೆಲ ತಿಂಗಳುಗಳ ಕಾಲ ಕೊರೊನಾ ಅಟ್ಟಹಾಸ ಹೀಗೆ ಇರಲಿದ್ದು, ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ. ಇನ್ನು ಜನರು ಸುರಕ್ಷತೆ ಕಾಪಾಡಿದರೆ ಕೊರೊನಾದಿಂದ ಪಾರಾಗಬಹುದು. ಹಾಗಾಗಿ ಭಯ, ಆತಂಕ ಬಿಟ್ಟು ಸರ್ಕಾರದ ಜೊತೆ ಕೈಜೋಡಿಸಿ ಎಂಬುದಾಗಿ ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಹೇಳಿದ್ದಾರೆ.