ಬೆಳ್ತಂಗಡಿ: ನಿನ್ನೆ  ಕೋಡಿಹಳ್ಳಿ ಸ್ವಾಮೀಜಿಯವರು ದೋಸ್ತಿ ಸರಕಾರ ಭವಿಷ್ಯ ಎರಡು ತಿಂಗಳು ಮಾತ್ರ ಎಂದು ಹೇಳಿರುವ ಬೆನ್ನಲ್ಲೇ, ಅನಿತಾ ಕುಮಾರಸ್ವಾಮಿಯವರು ಸ್ವಾಮೀ ಮೇಲೆ ನಮಗೆ ಬಹಳ ಗೌರವ ಇದೆ. ಅವರು ಈ ರೀತಿಯಾಗಿ ಮಾತನಾಡಬಾರದು. ಸರಕಾರದ ವಿರುದ್ಧ ಹೇಳಿಕೆಗಳನ್ನ ನೀಡುವುದನ್ನು ನಿಲ್ಲಿಸಬೇಕು. ಎಲ್ಲಾ ದೇವರ ಇಚ್ಛೆ. ದೇವರು ಹೇಗೆ ಮಾಡುತ್ತಾನೋ ಆ ರೀತಿ ಆಗುತ್ತೆ ಎಂದು ಹೇಳಿದರು.

ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸಂದರ್ಭ ದಲ್ಲಿ ಮಾದ್ಯಮದವರ ಪ್ರಶ್ನೆಗೆ ಈರೀತಿಯಾಗಿ ಪ್ರತಿಕ್ರಿಯಿಸಿದರು.