ಚಿತ್ರದುರ್ಗ: 13 ರ ಶನಿವಾರ ಕೋಟೆನಾಡಿಗೆ ರಾಹುಲ್ ಗಾಂಧಿಯವರು ಚಿತ್ರದುರ್ಗ, ತುಮಕೂರು ಹಾಗೂ ದಾವಣೆಗೆರೆ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ.

ನಗರದ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಕೊಳ್ಳಲಾಗಿದೆ. ಸುಮಾರು ಎರಡು ಲಕ್ಷ ಜನರ ಸೇರುವ ನಿರೀಕ್ಷೆ ಇದೆಯಂದು ಪಕ್ಷದ ಮುಖಂಡರುಗಳು ಹೇಳುತ್ತಾರೆ.

ಇದಕ್ಕೂ ಮುನ್ನಾ ಕೋಲಾರದಲ್ಲಿ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿಯವರು ಭಾಗವಹಸಿ ಆ ನಂತರ ಚಿತ್ರದುರ್ಗಕ್ಕೆ ಮಧ್ಯಾಹ್ನ 2 ಗಂಟೆಗೆ ಬರಲಿದ್ದಾರೆ.

ಇದೇ ವೇದಿಕೆಯಲ್ಲಿ 9 ರಂದು ನರೇಂದ್ರ ಮೋದಿಯವರು ಸಂಕಲ್ಪಯಾತ್ರೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದರು.  ಈಗ ಅದೇ ಜಾಗದಲ್ಲಿ 13 ರಂದು ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಆಗ ರಾಹುಲ್ ಗಾಂಧಿಯವರು ಮೋದಿಯವರಿಗೆ ಯಾವ ರೀತಿಯ ಟಾಂಗ್ ಕೊಡಲಿದ್ದಾರೆ ಎಂಬುದು ಕುತುಹಲ ಕೋಟೆ ನಾಡಿನ ಜನರಿಗೆ.!