ನವದೆಹಲಿ : ಕೊರೊನಾ ಸಂಕಷ್ಟದಲ್ಲಿರುವ ದೇಶದ ಜನತೆಗೆ ಕೇಂದ್ರ ಸರ್ಕಾರ ‘ದೀಪಾವಳಿ ಗಿಫ್ಟ್’ ನೀಡಲಿದೆ.ಹೌದು. ಕೊರೋನಾ ಸಂಕಷ್ಟದಲ್ಲಿರುವ ಜನತೆ ಮತ್ತು ಆರ್ಥಿಕತೆಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ವೇಳೆಗೆ ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಿಸುವ ಸಾಧ್ಯತೆ ಇದೆ.

ನಗರ ಯೋಜನೆಗಳು, ಪ್ರವಾಸೋದ್ಯಮ, ಉತ್ಪಾದನೆ ಸಂಬಂಧಿತ ಉತ್ತೇಜನ (ಪಿಎಲ್​ಐ) ಯೋಜನೆ ವಿಸ್ತರಣೆ ಇತ್ಯಾದಿಯನ್ನು ನಿರೀಕ್ಷಿಸಬಹುದು. ಇಂಥ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಉತ್ತೇಜಕ ಪ್ಯಾಕೇಜ್ ರೂಪಿಸುತ್ತಿದೆ, ಕೊರೋನಾ ಸಂಕಷ್ಟದಲ್ಲಿ ಕೇಂದ್ರ ಸರ್ಕಾರ ಹೊರಡಿಸಲಿರುವ ನಾಲ್ಕನೇ ಉತ್ತೇಜಕ ಪ್ಯಾಕೇಜ್ ಇದಾಗಿರಲಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಈ ಮೊದಲು ಕೇಂದ್ರ ಸರ್ಕಾರ ಕೆಲ ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಿಸಿದೆ. ಹೂಡಿಕೆಯ ಅಗತ್ಯ ಬೀಳುವಂಥ ಕ್ರಮಗಳನ್ನ ಕೈಗೊಳ್ಳಲಾಗಿದೆ. ನವಿ ಮುಂಬೈನಿಂದ ಹಿಡಿದು ಗ್ರೇಟರ್ ನೋಯ್ಡಾವರೆಗೆ ಪ್ರಸ್ತಾವಿತ ಏರ್​ಪೋರ್ಟ್ ನಿರ್ಮಾಣ ಯೋಜನೆಗಳೂ ಇದರಲ್ಲಿ ಒಳಗೊಂಡಿವೆ.