ನವದೆಹಲಿ : ಜೂನ್ ಮತ್ತು ಜುಲೈ ತಿಂಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಏಮ್ಸ್ ವೈದ್ಯ, ಕೊರೊನಾ ಟಾಸ್ಕ್ ಪೋರ್ಸ್ ನ ಪ್ರಮುಖ ಡಾ.ರಂಗದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಗುರುತಿಸಿರುವ ರೆಡ್ ಝೋನ್, ಹಾಟ್ ಸ್ಪಾಟ್ ಗಳ ಕಡೆ ಹೆಚ್ಚು ಗಮನಹರಿಸಬೇಕು. ಇಟಲಿ, ಅಮೆರಿಕದಂತೆ ಆಗಬಾರದು ಎಂದು ಕೇಂದ್ರ ಸರ್ಕಾರಕ್ಕೆ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 54 ಸಾವಿರ ದಾಟಿದೆ. ಕೊರೊನಾ ಸಾವಿನ ಸಂಖ್ಯೆ 1,790 ಆಗಿದೆ. ದೆಹಲಿಯಲ್ಲಿ ಪೇದೆಯೊಬ್ಬರು ಬಲಿಯಾಗಿದ್ದರೆ, ಒಟ್ಟು 487 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಕೊರೊನಾ ಸೋಂಕಿತರ ಪೈಕಿ 16,048 ಮಂದಿ ಗುಣಮುಖರಾಗಿದ್ದಾರೆ.