ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ 64.54ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ತಿಳಿಸಿದ್ದಾರೆ.

ವಿವಿಧ ಸಚಿವರೊಂದಿಗೆ ನಡೆದ ಕೋವಿಡ್‌ ಕುರಿತ ವಿಡಿಯೊ ಕಾನ್ಫಿರೆನ್ಸ್‌ನಲ್ಲಿ ಅವರು ಮಾತನಾಡಿ, ದೇಶದಲ್ಲಿ ಕೊರೋನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ 64.54ರಷ್ಟು ಹೆಚ್ಚಾಗಿದೆ. ಕಳೆದ 21 ದಿನಗಳಲ್ಲಿ ಚೇತರಿಕೆ ಪ್ರಮಾಣ ದ್ವಿಗುಣಗೊಂಡಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಸದ್ಯ ಸೋಂಕಿತರ ಸಂಖ್ಯೆ 16,38,871ಕ್ಕೆ, ಮೃತರ ಸಂಖ್ಯೆ 35,747ಕ್ಕೆ ತಲುಪಿದೆ ಎಂದು ಹೇಳಿದ್ದಾರೆ.