ನವದೆಹಲಿ: ಕೊರೋನಾ ಲಾಕ್ ಡೌನ್ ಹಿನ್ನೆಲೆ ನೀಡಲಾಗಿದ್ದ ಮೊರೆಟೋರಿಯಂ ಅವಧಿಯೊಳಗಿನ 2 ಕೋಟಿ ರೂ.ವರೆಗಿನ ಸಾಲಗಾರರ ಇಎಂಐಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

 ಆದರೆ, ಈ ಸೌಲಭ್ಯವು ನಿಶ್ಚಿತ ಠೇವಣಿ, ಬಾಂಡ್ ಮತ್ತು ಷೇರುಗಳ ಮೇಲೆ ಪಡೆದ ಸಾಲ ಹಾಗೂ ಗೃಹ, ಶಿಕ್ಷಣ ಮತ್ತು ವಾಹನ ಸೇರಿ ₹2 ಕೋಟಿಗೂ ಅಧಿಕ ಸಾಲ ಪಡೆದವರಿಗೆ ಸಿಗುವುದಿಲ್ಲ. ಇನ್ನು, ಅವಧಿ ಮೀರಿದ ಸಾಲಗಳಿಗೂ ಈ ಸೌಲಭ್ಯ ಸಿಗುವುದಿಲ್ಲ ಎಂದು ಎಫ್ಎಕ್ಯೂ ಬಿಡುಗಡೆ ಮಾಡುವ ಮೂಲಕ ಸರ್ಕಾರ ಮಾಹಿತಿ ನೀಡಿದೆ.