ಬೆಂಗಳೂರು: ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ರಷ್ಯಾ ಸಿಹಿ ಸುದ್ದಿ ನೀಡಿದ್ದು, ರಷ್ಯಾದ ಸಾವರಿನ್ ಹೆಲ್ತ್ ಫಂಡ್ ಭಾರತದ ಕಂಪನಿಯೊಂದಕ್ಕೆ ಸ್ಪುಟ್ನಿಕ್ V ಲಸಿಕೆಯ 100 ಮಿಲಿಯನ್ ಡೋಸ್ ‌ಗಳನ್ನು ನೀಡುವುದಾಗಿ ತಿಳಿಸಿದೆ.

ಈ ಬಗ್ಗೆ ರಷ್ಯನ್ ಡೈರೆಕ್ಟ್ ಇನ್ ವೆಸ್ಟ್ ಮೆಂಟ್ ಫಂಡ್ (RDIF) ಅಧಿಕೃತ ಘೋಷಣೆಯನ್ನು ಹೊರಡಿಸಿದೆ. ಇದರನ್ವಯ RDIF ನೂತನ ಕೋವಿಡ್ 19 ಲಸಿಕೆ ಸ್ಪುಟ್ನಿಕ್-V ಅನ್ನು ಭಾರತದೊಂದಿಗೆ ಹಂಚಿಕೊಳ್ಳಲು ಡಾ.ರೆಡ್ಡೀಸ್ ಲ್ಯಾಬೊರೇಟರಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.