ಬೆಂಗಳೂರು: ಕೊರೋನಾದಿಂದ ಗುಣಮುಖರಾಗಿ ಮನೆಗೆ ಬಂದವರಿಗೂ ಮತ್ತೆ ಸೋಂಕು ಕಾಣಿಸಿಕೊಂಡ ಪ್ರಕರಣಗಳು ವರದಿಯಾಗಿ ಆತಂಕ ಮೂಡಿಸಿತ್ತು.

ಈ ಬಗ್ಗೆ ವಿಜ್ಞಾನಿಗಳು ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದು, ಒಮ್ಮೆ ಗುಣಮುಖರಾದವರಿಗೆ 2ನೇ ಬಾರಿ ಕೊರೋನಾ ಕಾಣಿಸಿಕೊಳ್ಳುವ ಅಪಾಯ ಕಡಿಮೆ ಎಂದಿದ್ದಾರೆ. ಒಂದು ವೇಳೆ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಅವು ಸಾಂಕ್ರಾಮಿಕವಲ್ಲ. ಅವರನ್ನು ಸ್ಪರ್ಶಿಸಿದ ವ್ಯಕ್ತಿಗೆ ಸೋಂಕು ತಗುಲುವುದಿಲ್ಲ ಎಂದಿದ್ದಾರೆ.!