ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹಿನ್ನೆಲೆ ಸಚಿವ ಶ್ರೀರಾಮುಲು ಇಂದು ಲೆಕ್ಕ ಕೊಟ್ಟಿದ್ದರು. ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು ಹೀಗೆ.

ನಮ್ಮ ಬಳಿಯೂ ಅಂಕಿ-ಅಂಶಗಳಿವೆ. ಈ ಬಗ್ಗೆ ಗುರುವಾರ ಉತ್ತರಿಸುತ್ತೇನೆ. ಮೂಲಗಳ ಪ್ರಕಾರ, ಕಾಂಗ್ರೆಸ್ ವೈದ್ಯಕೀಯ ಉಪಕರಣಗಳನ್ನು ಕರ್ನಾಟಕ ಸರ್ಕಾರ ಎಷ್ಟರ ದರದಲ್ಲಿ ಖರೀದಿಸಿದೆ, ಹೊರ ರಾಜ್ಯಗಳ ಸರ್ಕಾರಗಳು ಎಷ್ಟಕ್ಕೆ ಖರೀದಿಸಿವೆ ಎಂಬ ಬಗ್ಗೆ ಮಾಹಿತಿ ಕಲೆಹಾಕಿದೆ ಎನ್ನಲಾಗಿದೆ.