ಬೆಂಗಳೂರು : ಗಣೇಶೋತ್ಸವ ಅಂದ್ರೆ ಸಾಕು ಎಲ್ಲೆಡೆ ಸಡಗರ, ಸಂಭ್ರಮ. ತಿಂಗಳಾನು ಗಟ್ಟಲೆ ಕೂರಿಸಿ ಆಚರಿಸುವಂತ ಗಣೇಶೋತ್ಸವಕ್ಕೆ ಇದೀಗ ಕೊರೋನಾ ಸೋಂಕಿನ ಭೀತಿ ಎದುರಾಗಿದೆ ಸಾರ್ವಜನಿಕರು ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು. ತಮ್ಮ ತಮ್ಮ ಮನೆಯಲ್ಲಿಯೇ ಗಣೇಶೋತ್ಸವ ಆಚರಿಸುವಂತೆ ಮಾಹಿತಿ ನೀಡುವಂತೆ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಮೂಲಕ ಈ ಬಾರಿ ಕೊರೋನಾ ಸೋಂಕಿನ ಭೀತಿಯಿಂದಾಗಿ ಅದ್ದೂರಿ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಹಾಗಾಗಿ ರಾಜ್ಯದಲ್ಲಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸುವಂತೆ ಸೂಚನೆ ನೀಡಿದರು. ಅಲ್ಲದೇ ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಗಣೇಶೋತ್ಸವ ಆಚರಿಸಿ. ಅದ್ದೂರಿಯಾಗಿ ಕೊರೋನಾ ಕಾಲದಲ್ಲಿ ಆಚರಿಸುವುದು ಬೇಡವೆಂದೂ ಮನವಿ ಮಾಡಿದ್ದಾರೆ.