ಬೆಂಗಳೂರು : ರಾಜ್ಯದಲ್ಲಿ ಇಂದು ದಾಖಲೆಯ ಕೊರೋನಾ ಸಂಖ್ಯ ಏರಿಕೆಯಾಗಿದೆ. ಇಂದು ಬೆಳಿಗ್ಗೆ 42 ಹೊಸ ಕೊರೋನಾ ಕೆಸ್ ಪತ್ತೆಯಾಗಿದ್ದರೇ, ಸಂಜೆಯ ವೇಳೆಗೆ ಈ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆ 15, ದಾವಣಗೆರೆ 12, ಧಾರವಾಡ 9, ಹಾಸನ 5, ಕೋಲಾರ 5, ಬೆಂಗಳೂರು 4, ಗದಗ 3, ಯಾದಗಿರಿ 2, ಬೀದರ್ 2, ದಕ್ಷಿಣ ಕನ್ನಡ 2 ಕಲಬುರ್ಗಿ 1, ಚಿಕ್ಕಬಳ್ಳಾಪರು 1, ಬಳ್ಳಾರಿ 1 ಮತ್ತು ಮಂಡ್ಯ 1 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಅಹಮದಾಬಾದ್, ಒರಿಸ್ಸಾಗೆ ಪ್ರಯಾಣ ಮಾಡಿದವರಾಗಿದ್ದಾರೆ. ಈ ಮೂಲಕ ಇಂದು ದಾಖಲೆಯ 63 ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುವ ಮೂಲಕ, ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ.

ಕೊರೋನಾಗೆ ಇದುವರೆಗೆ 31 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದರೇ, ಸೋಂಕಿತರಾದಂತ 433 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.