ಬೆಂಗಳೂರು: ಒಂದು ಅಂದಾಜಿನ ಪ್ರಕಾರ ಕೊರೋನಾ ಸಾಂಕ್ರಾಮಿಕ ರೋಗ ತಂದ ಸಂಕಷ್ಟದಿಂದಾಗಿ 15 ಕೋಟಿ ಮಂದಿ ಅತಿ ಕಡುಬಡತನಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವ ಬ್ಯಾಂಕ್‌ ಇಂದು ಹೇಳಿದೆ.

ಹೀಗಾಗಿ, ವಿಭಿನ್ನ ಆರ್ಥಿಕತೆಗೆ ಪ್ರತಿಯೊಂದು ರಾಷ್ಟ್ರಗಳು ತೆರೆದುಕೊಳ್ಳಬೇಕು. ಬಂಡವಾಳ, ಕೌಶಲ್ಯ ಮತ್ತು ಆವಿಷ್ಕಾರಗಳಿಗೆ ಉದ್ಯಮ ವಲಯವು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದೆ.

ಕೊರೋನಾ ಸೋಂಕಿನಿಂದ ಈ ವರ್ಷವೇ 8.8 ಕೋಟಿಯಿಂದ 11.5 ಕೋಟಿ ಮಂದಿ ಬಡತನಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವಬ್ಯಾಂಕ್‌ ತನ್ನ ವರದಿ ಹೇಳಿದೆ,