ಮಂಡ್ಯ: ಕೊರೋನಾ ಸೋಂಕಿತರನ್ನು ಗುಣಪಡಿಸಲು ಸಾಕಷ್ಟು ಔಷಧಗಳು ಲಭ್ಯವಿದ್ದು, ಯಾರೊಬ್ಬರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಸೋಂಕಿತರಲ್ಲಿ ಶೆ.90ರಷ್ಟು ಜನ ಗುಣಮುಖರಾಗುತ್ತಾರೆ. ಶೇ. 5-6 ಮಂದಿ ಮಾತ್ರವೇ ಆಸ್ಪತ್ರೆಗೆ ಬರುವ ಅವಶ್ಯಕತೆ ಇರುತ್ತದೆ. ಸರ್ಕಾರಕ್ಕೆ ಹಣದ ಕೊರತೆ ಇಲ್ಲ. 15 ಸಾವಿರ ಬೆಡ್​ ವ್ಯವಸ್ಥೆ ಮಾಡಲಾಗಿದ್ದು, ಸಾಕಷ್ಟು ಆಂಬುಲೆನ್ಸ್​ಗಳಿವೆ ಎಂದು ತಿಳಿಸಿದ್ದಾರೆ.