ನವದೆಹಲಿ : ಕೊರೋನಾಗೆ ಔಷಧಿ ಕಂಡುಹಿಡಿಯುವಲ್ಲಿ ಹಲವು ರಾಷ್ಟ್ರಗಳಲ್ಲಿ ಪ್ರಯೋಗ ನಡೆಯುತ್ತಿದೆ. ಈ ನಡುವೆ ಕೊರೊನಾ ಮಹಾಮಾರಿಗೆ ಆಯುರ್ವೇದದಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿದಿರುವುದಾಗಿ ಪತಂಜಲಿ ಯೋಗಗುರು ಬಾಬಾ ರಾಮ್ ದೇವ್ ಸ್ಪಷ್ಟಡಿಸಿದ್ದಾರೆ.

ಸುದ್ದಿಗೋಷ್ಟಿ ಮಾತನಾಡಿದ ಅವರು ಮಾರಣಾಂತಿಕ ಕೊರೊನಾ ಸೋಂಕಿಗೆ ಕೊರೋನಿಲ್ ಔಷಧದಿಂದ ಚಿಕಿತ್ಸೆ ನೀಡಬಹುದು ಎಂದು ತಿಳಿಸಿದರು. ಕೊರೊನಾಗೆ ಮೊದಲ ಆಯುರ್ವೇದಿಕ್ ಔಷಧಿಯನ್ನು ಸಂಶೋಧನೆ ಮಾಡಿದ್ದು, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕೊರೋನಿಲ್ ಔಷಧಿಯನ್ನು ಕಂಡುಹಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಸದ್ಯ 280 ಸೋಂಕಿತರ ಮೇಲೆ ಈ ಔಷಧಿ ಪ್ರಯೋಗಿಸಿದ್ದು, ಈ ಪೈಕಿ ಮೂರು ದಿನದೊಳಗೆ ಶೇ.69ರಷ್ಟು ಸೋಂಕಿತರು ಚೇತರಿಸಿಕೊಳ್ಳುತ್ತಾರೆ. ಅಲ್ಲದೇ, ಏಳು ದಿನದೊಳಗೆ ಶೇ.100 ರಷ್ಟು ಸೋಂಕಿತರು ಚೇತರಿಸಿಕೊಳ್ಳುತ್ತಾರೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಈ ಕೊರೋನಿಲ್ ಆಯುರ್ವೇದ ಔಷಧಿ ಬಳಕೆ ಮಾಡಿಕೊಳ್ಳಬಹುದು ಎಂದರು. ಈ ಆಯುರ್ವೇದಿಕ್ ಔಷಧವನ್ನು ವೈದ್ಯರು ತಜ್ಞರು, ವಿಜ್ಞಾನಿಗಳು ಪ್ರಯೋಗಾತ್ಮಕವಾಗಿ ಸಿದ್ದಪಡಿಸಿದ್ದು, ಈ ದೇಸಿ ಔಷಧ ಬಳಕೆಯಿಂದ ಕೊರೊನಾ ನಿಯಂತ್ರಣಕ್ಕೆ ಬರಲಿದೆ ಎಂದು ಅಭಿಪ್ರಾಯ ಪಟ್ಟರು. ಇದೇ ವೇಳೆ, ಕೊರೋನಿಲ್ ಔಷಧಿಯನ್ನು ಬಿಡುಗಡೆ ಮಾಡಲಾಯಿತು.