ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕು ಪತ್ತೆ ಮಾಡುವ ಪರೀಕ್ಷೆಯ ಅಂಕಿ-ಅಂಶದಲ್ಲಿ ಭಾರತ ಹೊಸದೊಂದು ದಾಖಲೆ ಬರೆದಿದೆ. 12 ಕೋಟಿಗೂ ಅಧಿಕ ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡುವ ಮೂಲಕ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಹೌದು, ಇಲ್ಲಿಯವರೆಗೂ.. ಅಂದ್ರೆ ನವೆಂಬರ್ 10 ರವರೆಗೂ ಭಾರತದಲ್ಲಿ ಒಟ್ಟು 12,07,69,151 ಸ್ಯಾಂಪಲ್ ಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ನಿನ್ನೆ ಒಂದೇ ದಿನ (ನವೆಂಬರ್ 10) ಒಟ್ಟು 11,53,294 ಸ್ಯಾಂಪಲ್ ಗಳಲ್ಲಿ ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಐ.ಸಿ.ಎಂ.ಆರ್ ಮಾಹಿತಿ ನೀಡಿದೆ.

ಕೊರೊನಾ ಸೋಂಕಿತರ ಅಂಕಿ-ಅಂಶ

ಒಟ್ಟು ಸೋಂಕಿತರು: 86,36,012

ಮೃತಪಟ್ಟವರು: 127,571

ಗುಣಮುಖರಾದವರು: 80,13,784

ಸಕ್ರಿಯ ಸೋಂಕಿತರು: 4,94,657