ಗುಬ್ಬಿ: ಲಾಕ್‌ಡೌನ್‌ ನಿಂದಾಗಿ ರಾಜ್ಯದಲ್ಲಿ ಕೊಬ್ಬರಿ ದರ ಕುಸಿದಿದ್ದು, ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ವಿಂಟಲ್‌ಗೆ 1,300 ಬೆಂಬಲ ಬೆಲೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಕೊಬ್ಬರಿಗೆ ಬೇಡಿಕೆ ಇಲ್ಲದಿರುವುದರಿಂದ ಬೆಲೆ ಕುಸಿದಿದೆ. ಹೀಗಾಗಿ ಕ್ವಿoಟಲ್‌ಗೆ 1,300 ಬೆಂಬಲ ಬೆಲೆ ಸೇರಿ 10,300ಕ್ಕೆ ನಾಫೆಡ್ ಮೂಲಕ ಖರೀದಿಸಲಾಗುವುದು ಎಂದಿದ್ದಾರೆ