ಚಿತ್ರದುರ್ಗ : ಭೀಕರ ನೆರೆಹಾವಳಿಗೆ ತುತ್ತಾಗಿರುವ ಕೊಡಗಿನ ನೆರೆಸಂತ್ರಸ್ತರ ನೆರವಿಗಾಗಿ ಶ್ರೀಮುರುಘಾಮಠವು ಕೊಡಗಿನ ಮೂರು ಕಡೆಗಳಲ್ಲಿ ಆಶ್ರಯ ಕೇಂದ್ರಗಳನ್ನು ತೆರೆದು, ಊಟ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಂತ್ರಸ್ತರಿಗೆ ವೈದ್ಯಕೀಯ ನೆರವನನು ನೀಡಲು ಬಸವೇಶ್ವರ ವೈದ್ಯಕೀಯ ಕಾಲೇಜಿನ 17ಜನ ವೈದ್ಯರ ತಂಡವನ್ನು ಕಳುಹಿಸಲಾಗಿದೆ. ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸದಾ ಹಚ್ಚ ಹಸಿರಿಗೆ ಹೆಸರಾದ ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆ ಭೀಕರ ಪ್ರವಾಹ ಸಂಭವಿಸಿ ಅನೇಕರು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಸರ್ಕಾರದೊಂದಿಗೆ ಅನೇಕ ಸಂಘ ಸಂಸ್ಥೆಗಳು, ನೌಕರರು ತಮ್ಮ ಸಹಾಯವನ್ನು ಮಾಡುತ್ತಿರುವುದು ಶ್ಲಾಘನೀಯ. ಈಗಾಗಲೇ ಶ್ರೀಮಠದಿಂದ ಮೂರುಕಡೆ ಆಶ್ರಯ ಕೇಂದ್ರಗಳನ್ನು ತೆರೆದು ಎಲ್ಲ ರೀತಿಯ ಸಹಾಯ ನೀಡಲಾಗುತ್ತಿದೆ. ನಿನ್ನೆ ಬಸವೇಶ್ವರ ಆಸ್ಪತ್ರೆಯಿಂದ 17ಜನ ವೈದ್ಯರ ತಂಡವು ಕೊಡಗಿಗೆ ಹೋಗಿದ್ದು ಕಾರ್ಯಾರಂಭ ಮಾಡಿದೆ ಎಂದರು.