ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಬಹುಮುಖ್ಯವಾದ ಮಾಹಿತಿ ನೀಡಿದ್ದು, ಉಪಕಾರ್ಯದರ್ಶಿಗಿಂತ ಕೆಳಗಿರುವ ಕಿರಿಯ ದರ್ಜೆಯ ಸಿಬ್ಬಂದಿಗೆ ಶೇ. 50 ರಷ್ಟು ಪ್ರಮಾಣದಲ್ಲಿ ಕಚೇರಿಗೆ ಆಗಮಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶೇ. 33 ರಷ್ಟು ಮಂದಿಗೆ ಮಾತ್ರವೇ ಕಚೇರಿಗೆ ಬಂದು ಕಾರ್ಯನಿರ್ವಹಿಸಬೇಕು ಎಂದು ಈವರೆಗೆ ಕೇಂದ್ರ ಸೂಚನೆ ನೀಡಿತ್ತು. ಆದರೆ ಲಾಕ್ ಡೌಣ್ ಸಡಿಲಿಕೆ ಬೆನ್ನಲ್ಲೇ ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣೆಯನ್ನು ಸಹಜ ಸ್ಥಿತಿಗೆ ತರಲು ಸರ್ಕಾರ ಮುಂದಾಗಿದೆ.

ಇಂದಿನಿಂದ ಶೇ. 50 ರಷ್ಟು ಸಿಬ್ಬಂದಿಗೆ ಕಚೇರಿಗೆ ಬರಲು ಸೂಚನೆ ನೀಡಲಾಗಿದೆ. ದಿನತಪ್ಪಿ ದಿನ ಶೇ. 50 ರಷ್ಟು ಸಿಬ್ಬಂದಿ ಕಚೇರಿಯಲ್ಲಿರಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.