ಹೈದರಬಾದ್: ಕೇಂದ್ರ ಸರ್ಕಾರ ದಾಖಲೆಯನ್ನು  ತಯಾರಿಸುವುದಾದರೆ, ದೇಶದ ನಿರುದ್ಯೋಗಿ ಯುವಕರ, ಬಡವರ ಮತ್ತು ಅನಕ್ಷರಸ್ಥರ ಬಗ್ಗೆ ದಾಖಲೆ ತಯಾರಿಸಿ ಜನರ ಮುಂದೆ ಇಡಲಿ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಪೌರತ್ವ ನೋಂದಣಿ, ಪೌರತ್ವ ಕಾಯ್ದೆ, ಪೌರತ್ವ ತಿದ್ದುಪಡಿ ಎಂಬ ನಾಟಕಗಳು ಬೇಡ. ಎಂದು  ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಹೈದರಾಬಾದ್‌ನಲ್ಲಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಆರ್‌ಪಿ ವಿರೋಧಿಸಿ ಸಮಾವೇಶದಲ್ಲಿ ಅವರು ಮಾತನಾಡಿದರು.