ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮಾತನಾಡಿದ್ದು, ಕೇಂದ್ರ ಸರ್ಕಾರದ ಕೆಟ್ಟ ನಿರ್ಧಾರದಿಂದ ದೇಶದಲ್ಲಿ ಇಂದು 6 ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದ್ದಾರೆ.

ಈ ವೇಳೆ, ಮಾ.25ರಂದು ಲಾಕ್ ಡೌನ್ ಮಾಡಿದ್ದಾಗ ದೇಶದಲ್ಲಿ ಕೇವಲ 534 ಪ್ರಕರಣಗಳು ಪತ್ತೆಯಾಗಿದ್ದವು. ಆಗಲೇ ಸೂಕ್ತ ಕ್ರಮ ಕೈಗೊಳ್ಳಲು ಸಮಯ ಇತ್ತು. ಆದರೆ ಕಳೆದ 5 ತಿಂಗಳಿನಿಂದ ಚಿಕಿತ್ಸಾ ವಿಧಾನ, ಮಾಸ್ಕ್ ತಯಾರಿಕೆ, ಔಷಧ ಎಂದೆಲ್ಲಾ ಚರ್ಚಿಸುತ್ತಿದ್ದರೂ ಸಫಲವಾಗಿಲ್ಲ ಎಂದು ಆರೋಪಿಸಿದರು.