ಹೊಸದಿಲ್ಲಿ: ಕೇಂದ್ರದ  ಸರ್ಕಾರ ಮುಂಗಾರಿನ 14 ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಘೋಷಿಸಿದೆ. ಇದರಿಂದ ಸಂಕ್ಷದಲ್ಲಿರು ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿದ್ದ, ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಬಂದಿದೆ.

ರಾಗಿಗೆ ಪ್ರತಿ ಕ್ವಿಂಟಲ್ಗೆ 2,897 ರೂ ಬೆಂಬಲ ಬೆಲೆ ಘೋಷಿಸಲಾಗಿದ್ದು ಶೇಕಡಾ 50 ರಷ್ಟು ಬೆಂಬಲ ಬೆಲೆ ನೀಡಲಾಗಿದ್ದು, ಹಿಂದೆ 1, 900 ರೂಪಾಯಿ ಇತ್ತು.

ಪ್ರತಿ ಕ್ವಿಂಟಲ್ ಭತ್ತಕ್ಕೆ ಕನಿಷ್ಠ 200 ರೂ. ಬೆಂಬಲ ಬೆಲೆ ಘೋಷಿಸಲಾಗಿದ್ದು,ಕಳೆದ ವರ್ಷ 1,550 ರೂಪಾಯಿ ಇತ್ತು. ಈಗ 1,750 ರೂಪಾಯಿ ಆಗಿದೆ. 12.9 % ಹೆಚ್ಚಳ ಮಾಡಲಾಗಿದೆ.

ಹೈಬ್ರಿಡ್ ಜೋಳಕ್ಕೆ ಕ್ವಿಂಟಾಲ್ಗೆ 2,430 ಆಗಿದ್ದು, ಹಿಂದೆ 1, 700 ಇತ್ತು , 40 % ಹೆಚ್ಚಳ ಮಾಡಲಾಗಿದೆ.

ಸೂರ್ಯ ಕಾಂತಿ ಗೆ ಕ್ವಿಂಟಾಲ್ಗೆ 5,388 ಬೆಂಬಲ ಬೆಲೆ ಘೋಷಿಸಲಾಗಿದ್ದು, ಹಿಂದೆ 4,100 ಇತ್ತು 31.4 % ಹೆಚ್ಚಳ ಮಾಡಲಾಗಿದೆ.

ಉದ್ದು ಕ್ವಿಂಟಾಲ್ಗೆ 5,600 ರೂ ಘೋಷಿಸಲಾಗಿದ್ದು, ಹಿಂದೆ 5,400 ರೂಪಾಯಿ ಇತ್ತು.

ಹತ್ತಿ (ಮದ್ಯಮ) 4,020 ರೂ ಇತ್ತು, ಈಗ 5, 150 ಆಗಿದೆ.

ತೊಗರಿ 5,675 ರೂಪಾಯಿ ಬೆಂಬಲ ಬೆಲೆ ಘೋಷಿಸಲಾಗಿದ್ದು, ಹಿಂದೆ 5,450 ರೂಪಾಯಿ ಇತ್ತು.

ಹೆಸರು ಬೇಳೆ ಕ್ವಿಂಟಾಲ್ಗೆ 6,975 ರೂಪಾಯಿ ಘೋಷಿಸಲಾಗಿದ್ದು , ಮೊದಲು 5,575 ರೂಪಾಯಿ ಇತ್ತು.

ನೆಲಗಡಲೆ 4, 890 ರೂ ಘೋಷಿಸಲಾಗಿದ್ದು, ಹಿಂದೆ 4,550 ರೂಪಾಯಿ ಇತ್ತು

ಮುಸುಕಿನ ಜೋಳ, ಎಳ್ಳಿಗೂ ಬೆಂಬಲ ಬೆಲೆ ಘೋಷಿಸಲಾಗಿದೆ.

ಸೋಯಾಬೀನ್ 3999 ರೂ ಬೆಂಬಲ ಬೆಲೆ ಘೋಷಿಸಲಾಗಿದೆ.

ಬುಧವಾರ ನಡೆದ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ (ಸಿಸಿಇಎ) ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2 ವಾರಗಳಲ್ಲಿ ಕಬ್ಬಿನ ಬೆಳೆಗೂ ಬೆಂಬಲ ಬೆಲೆ ಘೋಷಿಸುವುದಾಗಿ ಸರ್ಕಾರ ಹೇಳಿದೆ. ಕೇಂದ್ರ ದ ಈ ನಿರ್ಧಾರದಿಂದ ಬೊಕ್ಕಸಕ್ಕೆ 15,000 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಹೇಳಿದ್ದಾರೆ.