ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಈ ತಿಂಗಳಿನಿಂದ ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳವಾಗಲಿದ್ದು, ಕೇಂದ್ರ ಸರ್ಕಾರಿ ನೌಕರರ ಖಾತೆಗಳಿಗೆ ಹೆಚ್ಚಿನ ವೇತನ ಜಮಾ ಆಗುವ ಸಾಧ್ಯತೆ ಇದೆ ಈ ಮೂಲಕ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65 ಲಕ್ಷ ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಸಿಗಲಿದೆ.

ಶೇ. 4 ರಷ್ಟು ತುಟ್ಟಿಭೆತ್ಯೆ ಹೆಚ್ಚಳದಿಂದ ಡಿಎ ಯನ್ನು ಈಗಿನ ಶೇ.17ರಿಂದ ಶೇ.21ಕ್ಕೆ ಏರಿಸಲಾಗುವುದು. ಆದರೆ, ಯಾವಾಗ ಹೆಚ್ಚುವರಿ ದರ ಹೆಚ್ಚಳ ಮಾಡಲಾಗುವುದು ಎಂಬ ಬಗ್ಗೆ ಸರ್ಕಾರದಿಂದ ಅಧಿಕೃತ ಪ್ರಕಟಣೆ ಬರಬೇಕಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಡಿಆರ್ ಹೆಚ್ಚುವರಿ ಕಂತು ಗಳನ್ನು 2020ರ ಜನವರಿ 1ರಿಂದ ಅನ್ವಯವಾಗುವಂತೆ ಪಿಂಚಣಿದಾರರಿಗೆ ನೀಡಲು ಕೇಂದ್ರ ಸಚಿವ ಸಂಪುಟ ವು 2020ರ ಮಾರ್ಚ್ ನಲ್ಲಿ ಅನುಮೋದನೆ ನೀಡಿತ್ತು. ಆಗ ವಿತ್ತ ಸಚಿವಾಲಯ, ಬೆಲೆ ಏರಿಕೆಸರಿದೂಗಿಸಲು ಮೂಲ ವೇತನ/ಪಿಂಚಣಿಯ ಈಗಿನ ದರಕ್ಕಿಂತ ಶೇ.4ರಷ್ಟು ಹೆಚ್ಚಳವಾಗಲಿದೆ ಎಂದು ಮಾಹಿತಿ ನೀಡಿತ್ತು.