ನವದೆಹಲಿ: ಕೇಂದ್ರ ಸರ್ಕಾರವು ಸ್ವಾವಲಂಬಿ ಭಾರತ ಅಭಿಯಾನದಡಿ ಪಿಎಂ ಸ್ವಾನಿಧಿ ಯೋಜನೆಯನ್ನು ಜು.2ರಂದು ಪ್ರಾರಂಭಿಸಿತು.

ಈ ಯೋಜನೆ ಅಡಿ 50 ಲಕ್ಷ ಜನರಿಗೆ ಸಾಲ ನೀಡುವ ಗುರಿಯನ್ನು ಹೊಂದಿದೆ. ಇಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ₹10,000 ಸಾಲಕ್ಕೆ  ಗ್ಯಾರೆಂಟಿ ನೀಡುವ ಅಗತ್ಯವಿಲ್ಲ.

1 ವರ್ಷದಲ್ಲಿ ಮಾಸಿಕ ಕಂತುಗಳಲ್ಲಿ ಸಾಲವನ್ನು ಮರುಪಾವತಿಸಬೇಕಾಗುತ್ತದೆ. ಸಾಲವನ್ನು ಸರಿಯಾಗಿ ಮರುಪಾವತಿಸುವವರಿಗೆ ವಾರ್ಷಿಕ 7 ಪ್ರತಿಶತದಷ್ಟು ಬಡ್ಡಿ ಸಬ್ಸಿಡಿ ಮತ್ತು 1200 ರವರೆಗೆ ಕ್ಯಾಶ್‌ಬ್ಯಾಕ್ ದೊರೆಯುತ್ತದೆಯಂತೆ.!