ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಸರ್ಕಾರ ಶಾಲೆ ತೆರೆಯಲು ಇನ್ನೂ ಮುಂದಾಗುತ್ತಿಲ್ಲ. ಹಾಗಾಗಿ  ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯವು ಇಂದು ಆನ್ ಲೈನ್ ಶಿಕ್ಷಣ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ.

1ರಿಂದ 8ನೇ ತರಗತಿವರೆಗೆ 45 ನಿಮಿಷದ 2 ತರಗತಿ ಹಾಗೂ 9ರಿಂದ 12ನೇ ತರಗತಿವರೆಗೆ 45 ನಿಮಿಷದ 4 ತರಗತಿಗಳನ್ನು ನಡೆಸುವಂತೆ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಇದರ ಮೇಲುಸ್ತುವಾರಿಯನ್ನು ರಾಜ್ಯ ಸರ್ಕಾರಗಳೇ ವಹಿಸಿಕೊಳ್ಳಲಿವೆ.